ಒಂದು ಇನ್ಸಿಡೆಂಟ್ (ಕೋ-ಇನ್ಸಿಡೆಂಟ್ )

ಬಸ್ ಇನ್ನೇನು ಹೊರಡುವುದರಲ್ಲಿತ್ತು, ಬೆನ್ನಿಗೆ ಒಂದು ಬ್ಯಾಗ್ ಹಾಕಿಕೊಂಡು ಓಡೋಡಿ ಬಂದು ಬಸ್ ಹತ್ತಿ, ಬ್ಯಾಗ್ ಇಡುವ ಜಾಗದಲ್ಲಿ ಇಟ್ಟು ಸೀಟ್ ಮೇಲೆ ಕುಳಿತು ಕೊಳ್ಳುವಾಗ ಸುಸ್ತ್ ಆಗಿದ್ದೆ. ಬಸ್ ನಲ್ಲಿ ಇದ್ದವರು ನನ್ನನ್ನು ಬಿಟ್ಟು ಕೇವಲ ೭ ಜನ ಮಾತ್ರ! . ಬಸ್ ಹೊರಟಿತ್ತು, ನಿದ್ದೆ ಹತ್ತಿರಲಿಲ್ಲ. ಹೊರಗಡೆ ಕತ್ತಲಿದ್ದರೂ ಕಣ್ಣು ಹಾಯಿಸುತ್ತಾ ಯೋಚಿಸುತ್ತಿದ್ದೆ , ಎಷ್ಟು ಬೇಗ ಎಲ್ಲ ಮುಗಿದು ಹೋಯಿತು, ಮದುವೆ ಹೇಗೆ ಮಾಡೋಣ, ಎಲ್ಲಿ ಮಾಡಿದರೆ ಚೆನ್ನಾಗಿರುತ್ತೆ, ಯಾವ ಕಜ್ಜಾಯ ಮಾಡೋಣ ... ಅನ್ನೋ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಮೊಳಗುತ್ತಿದೆ . ಏನೇ ಕಷ್ಟ ಬಂದರೂ ಮದುವೆ ಮಾಡಿಕೊಂಡೆ ಹೋಗುವೆ ಎನ್ನುವ ವಿಘ್ನೇಶ್ ಛಲ .. ಅಬ್ಬ!! ವಿಘ್ನೇಶ್ ಪಟ್ಟ ಕಷ್ಟಗಳು, ಒಂದೇ ಎರಡೇ..., "ಟಿಕೆಟ್ ಮೇಡಂ" ಎಂದು ೨ ಸಲ ಕೇಳಿದರಂತೆ, ಹತ್ತು ಹಲವು ಯೋಚನೆಗಳು ತಲೆಯಲ್ಲಿ ಓಡುತ್ತಿದ್ದರಿಂದ, ಕಂಡಕ್ಟರ್ ಕೇಳಿದ್ದು ನನಗೆ ಕೇಳಿಸಲೇ ಇಲ್ಲ!.. "ಹಲೋ ಮೇಡಂ" ಮತ್ತೆ ಕರೆದಾಗ, ಯೋಚನಾ ಲೋಕದಿಂದ ಹೊರಗೆ ಬಂದು, ಪರ್ಸ್ ನಿಂದ ದುಡ್ಡು ತೆಗೆದು ಕಂಡಕ್ಟರ್ ಗೆ ಕೊಟ್ಟು, ಟಿಕೆಟ್ ತೆಗೆದುಕೊಂಡೆ.
ನ್ಯೂ ಯಾರ್ಕ್ ಗೆ ಹೊರಟಿದ್ದ ವಿಘ್ನೇಶ್ ರನ್ನು ಮಾರ್ಚ್ 24 2008, ಸೋಮವಾರ ರಾತ್ರಿ ೧೨ ಘಂಟೆಗೆ ಬೀಳ್ಕೊಟ್ಟು, ನನಗೆ ಬುಧವಾರ ಬೆಳಿಗ್ಗೆ 9 ಘಂಟೆಗೆ ವೀಸಾ ಇಂಟರ್ವ್ಯೂ ಇದ್ದುದರಿಂದ, ಮಂಗಳವಾರ ರಾತ್ರಿ ಚೆನ್ನೈ ಗೆ ಹೊರಟಿದ್ದೆ. ನನಗೆ ನಾಳೆ ವೀಸಾ ಸಿಕ್ಕಿ, ಬೇಗ ನ್ಯೂ ಯಾರ್ಕ್ ಗೆ ಹೋಗುವ ಹಾಗೆ ಅಗಲಪ್ಪ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಂತೆಯೇ ವಿಘ್ನೇಶ್ ಕಾಲ್ ಮಾಡಿದರು. ಎಲ್ಲ ಡಾಕ್ಯುಮೆಂಟ್ ಗಳನ್ನೂ ತಗೊಂಡಿದೀಯ ತಾನೆ? ವೀಸಾ ಇಂಟರ್ವ್ಯೂ ಗೆ ನಾನು ಕೊಟ್ಟಿರುವ ಫೈಲ್ ಗಳನ್ನೂ ಮರೆತಿಲ್ಲ ತಾನೆ ಎಂದು ನನ್ನನ್ನು ವಿಚಾರಿಸಿದರು. ಹಾಗೆ ಸ್ವಲ್ಪ ಹೊತ್ತು ಮಾತನಾಡಿ ಮುಗಿಸಿದೆವು. ಕೈಯಲ್ಲಿ ಮೊಬೈಲ್ ಇದ್ದಂತೆ ನಿದ್ದೆ ಗೆ ಶರಣಾದೆ.
ಚೆನ್ನೈ ತಲುಪಿದಾಗ ಬೆಳಿಗ್ಗೆ ೪.೩೦.. ಎಲ್ಲರು ಎದ್ದು ಅವರವರ ಬ್ಯಾಗ್ ತೆಗೆಯುತ್ತಿದ್ದಂತೆ ನನಗೆ ಎಚ್ಚರವಾಯಿತು. ನಾನೂ ಎದ್ದು ಬ್ಯಾಗ್ ತೆಗೆಯಲು ಹೋದರೆ ನನಗೆ ಉಸಿರು ಕಟ್ಟಿದಂತಾಗಿತ್ತು. ನನ್ನ ಬ್ಯಾಗ್ ಇರಲಿಲ್ಲ ಅಲ್ಲಿ.ಕೈಯಲ್ಲಿ ಮೊಬೈಲ್ ಬಿಟ್ಟರೆ ನನ್ನ ಹತ್ತಿರ ಇನ್ನೇನೂ ಇರಲಿಲ್ಲ. ನೋ ಪಾಸ್ಪೋರ್ಟ್, ನೋ ಮ್ಯಾರೇಜ್ ಸರ್ಟಿಫಿಕೆಟ್ , ನಥಿಂಗ್! . ಏನು ಮಾಡಬೇಕೆಂದು ತೋಚಲಿಲ್ಲ. ವಿಘ್ನೇಶ್ ಗೆ ಕಾಲ್ ಮಾಡಿದರೆ, ಅದು ವಾಯ್ಸ್ ಮೇಲ್ ಗೆ ಹೋಗುತ್ತಿತ್ತು.., call me back, its urjunt ಅಂತ ವಾಯ್ಸ್ ಮೇಲ್ ಹಾಕಿದೆ.. ಮತ್ತೆ ಹುಡುಕಾಡಲು ಆರಂಬಿಸಿದೆ. ನಾನು ಬ್ಯಾಗ್ ಇಟ್ಟ ಜಾಗದಲ್ಲಿ ಇನ್ನೊಂದು ಸಣ್ಣ ಬ್ಯಾಗ್ ಇತ್ತು. ಆಗ ತಿಳಿಯಿತು ಇದು ಅದಲು-ಬದಲು ಆಗಿದ್ದು ಅಂತ!. ಇನ್ನೊ ಯಾರೂ ಬಸ್ ನಿಂದ ಇಳಿದಿಲ್ಲವಾದ್ದರಿಂದ, ಬ್ಯಾಗ್ ಬಸ್ ನಿಂದ ಆಚೆಗೆ ಹೋಗಲು ಸಾಧ್ಯವೇ ಇಲ್ಲ ಎಂದು ದೈರ್ಯ ತಂದು ಕೊಂಡೆ. ಎಲ್ಲರು ಇಳಿಯಲು ಮುಂದಾಗಿದ್ದರು . ಒಬ್ಬ ಇಳಿದು ಹೋದರು ನನ್ನ ಬ್ಯಾಗ್ ಅವರ ಜೊತೆ ಹೋಗುವ ಶಕ್ಯತೆ ತುಂಬ ಇದ್ದಿದ್ದರಿಂದ; ದಯವಿಟ್ಟು ಯಾರೂ ಇಳಿದು ಹೋಗಬೇಡಿ ನನ್ನ ಬ್ಯಾಗ್ ಕಳೆದು ಹೋಗಿದೆ ಅಂತ ರಿಕ್ವೆಸ್ಟ್ ಮಾಡಿಕೊಂಡೆ ... ಎಲ್ಲರು ಬಸ್ ನಲ್ಲೆ ಇದ್ದು ಸಹಕರಿಸಿದರು ಆದರೆ ನಾನು ಹೇಳುತ್ತಿದ್ದಂತೆ ಒಬ್ಬ ಮಾತ್ರ ಇಳಿದು ಹೋಗಿದ್ದರು.!. ಅವರನ್ನು ಕರೆಯುತ್ತಿದ್ದಂತೆಯೇ ಅವರು ಕಣ್ಮರೆಯಾದರು. ಅವರೊಬ್ಬರಿಗಾಗಿ ಬಸ್ ನಲ್ಲಿ ಇರುವ ಉಳಿದವರನ್ನು ಕಾಯಿಸುವುದು ಸರಿಯಲ್ಲ ಎಂದು, ಅಲ್ಲಿರುವ ಎಲ್ಲರ ಬ್ಯಾಗ್ ಗಳನ್ನೂ ಪರೀಕ್ಷಿಸಿದೆ. ಯಾರ ಬಳಿಯೂ ಇರಲಿಲ್ಲ. ಎಲ್ಲರೂ ಮೆಲುದನಿಯಲ್ಲಿ ನನ್ನ ಮೇಲೆ ಗೊಣಗುತ್ತ ಬಸ್ ಇಳಿದು ಹೋದರು!. ಅವರು ನನ್ನ ಮೇಲೆ ರೆಗುವುದೇ ಸರಿಯೇ, ಯಾರು ತಾನೆ ಸುಮ್ಮನಿರುವರು, ಅವರ ಮೇಲೆ ಅಲ್ಲದ-ಸಲ್ಲದ ಅಪವಾದ ಹಾಕಿದರೆ! ಆದರೆ ನನಗೆ ಬೇರೆ ದಾರಿ ಇರಲಿಲ್ಲ. ನನ್ನ ಬ್ಯಾಗ್ ಇಲ್ಲದಿರುವುದು ಸತ್ಯ. ನನ್ನ ಬ್ಯಾಗ್ ಇರುವ ಜಾಗದಲ್ಲಿ ಇನ್ನೊಂದು ಬ್ಯಾಗ್ ಇರುವುದು ಸತ್ಯ!. ಇನ್ನೇನು ಮಾಡುವುದು ಎಂದು ಯೋಚಿಸುತ್ತಿದ್ದಂತೆ ವಿಘ್ನೇಶ್ ಕಾಲ್ ಮಾಡಿದರು. ಅವರು ಆಗಷ್ಟೆ ನ್ಯೂ ಯಾರ್ಕ್ ಗೆ ಬಂದಿಳಿದು, ಮನೆಗೆ ತಲುಪಿದ್ದರಂತೆ. ನಾನು ನಡೆದ ವಿಚಾರ ಹೇಳಿದೆ. ಅವರಿಗೆ ಬಹಳ ತಾಳ್ಮೆ .ಮೊದಲೇ ಗಾಬರಿ ಯಾಗಿರುವ ನನಗೆ ಈಗ ಒಂದು ಮಾತು ಗಟ್ಟಿ ಹೇಳಿದರೂ ಅಳುವೇ ಎಂದು ಗೊತ್ತಿದ್ದರಿಂದ , ನಿದಾನವಾಗಿ, ಸಹನೆಯಿಂದ; you can handle it, dont get tensed,be calm... ನೀನು ನ್ಯೂ ಯಾರ್ಕ್ ಗೆ ಬರುವುದು ಒಂದು ತಿಂಗಳು ತಡವಾಗಬಹುದು but it's ok ಅಂತ ನನಗೆ ದೈರ್ಯ ತುಂಬಿದರು.. ನಿನ್ನ ಬ್ಯಾಗ್ ಇಟ್ಟ ಜಾಗದಲ್ಲಿ ಇನ್ನೊಂದು ಬ್ಯಾಗ್ ಇದೆ ಅಂದೆಯಲ್ಲ.., ಅದರಲ್ಲಿ ಅವರ ಅಡ್ರೆಸ್ ಸಿಗಬಹುದು, ಚೆಕ್ ಮಾಡು ಅಂದರು. ಎಲ್ಲ ತೆಗೆದು ನೋಡಿದರೆ, ಒಂದು ಜೊತೆ ಬಟ್ಟೆ ಬಿಟ್ಟರೆ ಇನ್ನೇನೂ ಇಲ್ಲ!.., ನನ್ನ ಬ್ಯಾಗ್ ಹೆಚ್ಚು ಕಡಿಮೆ 5 kg ಆದರೂ ಇರಬಹುದು, ಇಲ್ಲಿ ಸಿಕ್ಕಿರೋ ಬ್ಯಾಗ್ 1/4 kg ಕೂಡ ಇಲ್ಲ.., ಅದು ಹೇಗೆ ಅದಲು ಬದಲಾಗ ಬಹುದು ಎಂದು ಯೋಚಿಸಿದರೆ.. ಅನಿಸುತ್ತಿತ್ತು, ಯಾರೋ ಬೇಕು ಅಂತಲೇ ನನ್ನ ಬ್ಯಾಗ್ ತೆಗೆದು ಕೊಂಡು ಹೋಗಿರಬೇಕು. ನನ್ನ ಕ್ರೆಡಿಟ್ ಕಾರ್ಡ್ಸ್, atm ಕಾರ್ಡ್ಸ್ ಎಲ್ಲ ಸಿಗತ್ತಲ್ಲ ಅಂತ ಪ್ಲಾನ್ ಮಾಡಿರಬೇಕು ಅಂತ. ಸರಿ ಈಗ ಇಲ್ಲಿ ಇಲ್ಲ ಅಂದರೆ, ಮತ್ತೆ ತಡ ಮಾಡಬೇಡ.. ಪೋಲಿಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬಾ ಅಂದರು. ಅಲ್ಲೇ ಒಂದು ಕಿಲೋಮೀಟರು ದೂರದಲ್ಲಿರುವ ಸ್ಟೇಷನ್ ಗೆ ನಡೆದು ಕೊಂಡು ಹೋದೆ. ಅಲ್ಲಿರುವ ಪೊಲೀಸರಿಗೆ ಇಂಗ್ಲಿಷ್ ಬರಲ್ಲ, ನನಗೆ ತಮಿಳ್ ಬರಲ್ಲ! ಹೇಗೋ ತಿಳಿಸಿ ಹೇಳಿದೆ. ಯಾರಾದರು ತಂದು ಕೊಟ್ಟರೆ ನಿಮಗೆ ತಿಳಿಸುತ್ತೇವೆ ಅಂತ ನನ್ನ ಸಮಾದಾನ ಮಾಡಿ ಕಳುಹಿಸಿಬಿಟ್ಟರು !. ನಾನು ಬಸ್ ನಿಂತ ಜಾಗಕ್ಕೆಮತ್ತೆ ಬಂದು ನಿಂತೇ; ಯಾರಾದರು ತಂದು ಕೊಡಬಹುದು ಅನ್ನುವ ಒಂದೇ ಒಂದು ಸಣ್ಣ ಆಸೆಯಿಂದ. ಉಹುನ್... ಯಾರೂ ಇಲ್ಲ. ಮತ್ತೆ ವಿಘ್ನೇಶ್ ಅವರ ಫೋನು,
ಏನಾಯ್ತು? ..
ಸಿಕ್ಕಿಲ್ಲ...
ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬಂದೆಯಾ? ..
ಹೋಗಿದ್ದೆ ...
ಕಂಪ್ಲೇಂಟ್ ಕೊಟ್ಟಿದೀವಿ ಅಂತ ಅವರಿಂದ ಏನಾದ್ರು ಲೆಟರ್ ತಂದ್ಯಾ?..
ಇಲ್ಲ, ಅವರು ಎಷ್ಟು ಕೇಳಿದರೂ ಕೊಟ್ಟಿಲ್ಲ, ಸಿಕ್ಕಿರೆ ಫೋನ್ ಮಾಡ್ತೀವಿ ಅಂತ ನನ್ನ ಫೋನ್ ನಂಬರ್ ತೆಗೆದುಕೊಂಡು ಕಳುಹಿಸಿಬಿಟ್ಟರು. ..
ಅದು ವಿಘ್ನೇಶ್ ಗೆ ಸರಿ ಅನಿಸಲಿಲ್ಲ. ಮತ್ತೆ ಹೋಗಿ ಲೆಟರ್ ತೆಗೆದುಕೊಂಡು ಬಾ, ಪಾಸ್ಪೋರ್ಟ್ ಗೆ ಅಪ್ಲೈ ಮಾಡೋಕೆ ಹೆಲ್ಪ್ ಆಗತ್ತೆ ಅಂದ್ರು. ಸರಿ ಅಂತ ಮತ್ತೆ ಹೊರಟೆ ೧ ಕಿಲೋಮೀಟರು ದೂರದಲ್ಲಿರೋ ಸ್ಟೇಷನ್ ಗೆ. ಅಲ್ಲಿ ಈಗ ಇರುವವರು ಬೇರೆ ಪೊಲೀಸರು . ಅವರಿಗೆ ನಡೆದ ರಾಮಾಯಣ ಮತ್ತೆ ವಿವರಿಸುವುದು ಕಷ್ಟ ವಾದರೂ ಹೇಳಲು ಆರಂಬಿಸಿದೆ.. ಅದೇ ಸಮಯಕ್ಕೆ ಒಂದು ಫೋನ್ ಬಂತು, ನನ್ನ ಮೊಬೈಲ್ ಗೆ ಅಲ್ಲ ಆದರೆ ಆ ಪೋಲಿಸ್ ಸ್ಟೇಷನ್ ಗೆ! ತಮಿಳಿನಲ್ಲಿ ಮಾತನಾಡುತ್ತಿದ್ದರು. ನನಗೆ ಅರ್ತವಾಗುತ್ತಿರಲಿಲ್ಲ. "Hello", ಮತ್ತು "Bag" ಎನ್ನುವ ಎರಡು ಶಬ್ದ ಮಾತ್ರ ಇಂಗ್ಲಿಷ್ ನಲ್ಲಿ ಹೇಳಿದ್ದು. ನಾನು ಒಳಗಿನ ಒಂದು ಕೋಣೆಯಲ್ಲಿದ್ದೆ. ಬ್ಯಾಗ್ ಅಂತ ಕೇಳಿದ್ದೆ ಓಡಿದೆ ಫೋನಿನ ಹತ್ತಿರ. I think it's for me, i will answer it. ಅಂತ ಫೋನ್ ರಿಸೀವರ್ ತೆಗೆದುಕೊಂಡು ಮಾತನಾಡಿದೆ.
Hello..
i took, some one's bag by mistakenly..
where and when?...
today early morning, at 4.30, in bangalore-chennai bus!..
oh...ok , it should be mine then, i missed my bag today morning.. in bangalore-chennai bus. And I came to this police station to give a camplaint....
i am really sorry madam, it was by mistake. please don't give any camplaint madam, i will return it to you, please come to the bus station....
sure....
ನಾನು ಖುಷಿಯಿಂದ ಕುಣಿಯಲು ಆರಂಬಿಸಿದೆ. ನನಗೆ ಮತ್ತೆ ಜೀವ ಬಂದಿತ್ತು. ವಿಘ್ನೇಶ್ ಗೆ ಕಾಲ್ ಮಾಡಿ, ನೀವು ಮತ್ತೆ ಸ್ಟೇಷನ್ ಗೆ ಹೋಗಿ ಬಾ ಎಂದು ನನಗೆ ಹೇಳಿದ್ದು ಎಷ್ಟು ಒಳ್ಳೇದಾಯಿತು ಗೊತ್ತೇ?.., ನಾನು ಸ್ಟೇಷನ್ ಗೆ ಎರಡನೇ ಬಾರಿ ಹೋದಾಗಲೇ, ನನ್ನ ಬ್ಯಾಗ್ ತೆಗೆದುಕೊಂಡು ಹೋಗಿರುವ ವ್ಯಕ್ತಿ , ಅದೇ ಪೋಲಿಸ್ ಸ್ಟೇಷನ್ ಗೆ, ನಾನಿರುವಾಗಲೇ ಫೋನ್ ಮಾಡಿದ್ದರು. ಎಷ್ಟು ಕೋ- ಇನ್ಸಿಡೆಂಟ್ ಅಲ್ವಾ? ಎಂದು ನನಗಾದ ಖುಷಿ ತೋಡಿಕೊಳ್ಳುತ್ತ ಇದ್ದೆ. ಆಗ ಅವರು ನನಗೆ ಹೇಳಿದ್ರು, ವೆರಿ ಗುಡ್ .. ಈಗ ನಿನಗೆ ಇನ್ನೊಂದು ಕೋ-ಇನ್ಸಿಡೆಂಟ್ ಹೇಳುವೆ ಅಂತ ನ್ಯೂ ಯಾರ್ಕ್ ನಲ್ಲಿ ನೆಡದ ಘಟನೆ ಹೇಳಿದರು ;ನೀನು ಬೆಳಿಗ್ಗೆ ಎದ್ದು ಬ್ಯಾಗ್ ಮಿಸ್ ಆಯಿತು ಅಂತ ಫೋನ್ ಮಾಡಿದಾಗ ನಾನು ಏರ್ ಪೋರ್ಟ್ ನಿಂದ ಆಗಷ್ಟೆ ಮನೆಗೆ ಬಂದಿದ್ದೆ. ನನ್ನ ಬ್ಯಾಗ್ ಏರ್ ಪೋರ್ಟ್ ನಲ್ಲಿ ಮಿಸ್ ಆಗಿತ್ತು. ಈಗ ನೀನು ಫೋನ್ ಮಾಡುವ ಒಂದು ಕ್ಷಣ ಮುಂಚೆ ನನಗೆ ಏರ್ ಪೋರ್ಟ್ ನಿಂದ ಮತ್ತೆ ಕಾಲ್ ಬಂದಿತ್ತು, ಅವರು ಹೇಳಿದ್ರು "Bag has been misplaced by someone else. they are returning it now." ಇದು ಎಂತಹ ಕಾಕತಾಳೀಯ !
Print Friendly and PDF
Share/Bookmark